ಲೆಫ್ಟಿನೆಂಟ್ ಜನರಲ್ ವಿನೋದ್ ಜಿ. ಖಂಡಾರೆ ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ಸೇನಾ ಪದಕ ಪುರಸ್ಕೃತರು. ಇವರು ಭಾರತೀಯ ಸೇನೆಯ ಮಾಜಿ ಅಧಿಕಾರಿಯಾಗಿದ್ದು, ಪ್ರಸ್ತುತ ರಕ್ಷಣಾ ಸಚಿವಾಲಯದಲ್ಲಿ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ೩೧ ಜನವರಿ ೨೦೧೮ ರಂದು ಸಕ್ರಿಯ ಮಿಲಿಟರಿ ಸೇವೆಯಿಂದ ನಿವೃತ್ತರಾದರು. ೨೦೧೮ ರಿಂದ ೨೦೨೧ ರವರೆಗೆ ಕಾರ್ಯದರ್ಶಿ ಮಟ್ಟದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಮಿಲಿಟರಿ ಸಲಹೆಗಾರರಾಗಿದ್ದರು. ತಮ್ಮ ಅಂತಿಮ ಸಕ್ರಿಯ ಮಿಲಿಟರಿ ನೇಮಕಾತಿಯಲ್ಲಿ, ಅವರು ರಕ್ಷಣಾ ಗುಪ್ತಚರ ಸಂಸ್ಥೆ ಮಹಾ ನಿರ್ದೇಶಕರಾಗಿ ಮತ್ತು ಗುಪ್ತಚರ ಇಲಾಖೆಯ ಸಮಗ್ರ ರಕ್ಷಣಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ನವೆಂಬರ್ ೨೦೧೫ ರಿಂದ ಜನವರಿ ೨೦೧೮ ರವರೆಗೆ ಸೇವೆ ಸಲ್ಲಿಸಿದರು. == ಸೈನಿಕ ಜೀವನ == ೧೯೭೯ರ ಸೆಪ್ಟೆಂಬರ್‌ನಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯ,ಎಸ್‌ಎಸ್‌-೨೮ ತರಬೇತಿಯಲ್ಲಿ ಭಾರತೀಯ ಸೇನೆಯ ೧೪ನೇ ಗರ್ವಾಲ್ ರೈಫಲ್ಸ್‌ಗೆ ಇವರನ್ನ ನೇಮಕಮಾಡಲಾಯಿತು. ಪದಾತಿದಳದ ಅಧಿಕಾರಿಯಾಗಿ, ಅವರು ಸಿಯಾಚಿನ್, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ ಮತ್ತು ಈಶಾನ್ಯ ಪ್ರದೇಶದ ವಿವಿಧ ವಲಯಗಳಲ್ಲಿ ಕಾರ್ಯಾಚರಣೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.ಖಂಡಾರೆಯವರು ಭಾರತದ ಈಶಾನ್ಯ ಗಡಿಯಲ್ಲಿ ಕಾರ್ಯಾಚರಣೆಯ ಮಾಡುವ ಬ್ರಿಗೇಡ್‌ನ ನೇತೃತ್ವ ವಹಿಸಿದ್ದರು. ಇವರು ಕಾಶ್ಮೀರ ಕಣಿವೆಯಲ್ಲಿ ೨೦೧೦-೧೧ ರಲ್ಲಿ ಉತ್ತರ ಕಾಶ್ಮೀರದಲ್ಲಿ ಪ್ರತಿ ಬಂಡಾಯ ಪಡೆಯ ಉಪ ಜಿ.ಓ.ಸಿ. ಯಾಗಿ ಸೇವೆ ಸಲ್ಲಿಸಿದರು. ಇವರು ಮಹೂ ಪದಾತಿದಳ ಶಾಲೆ ಶಸ್ತ್ರಾಸ್ತ್ರಗಳ ಬೋಧಕರಾಗಿ ಮತ್ತು ವೆಲ್ಲಿಂಗ್ಟನ್ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೫ ರಿಂದ ೨೦೧೮ ರವರೆಗೆ ಭಾರತದ ರಕ್ಷಣಾ ಗುಪ್ತಚರ ಸಂಸ್ಥೆಯ (ಡಿಐಎ) ಮಹಾ ನಿರ್ದೇಶಕರಾಗಿದ್ದರು. == ಸೇನಾ ನಂತರದ ವೃತ್ತಿಜೀವನ == ಅಕ್ಟೋಬರ್ ೨೦೧೮ ರಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್‌ನ ಮಿಲಿಟರಿ ಸಲಹೆಗಾರರಾಗಿ ಖಂಡಾರೆ ಅವರನ್ನು ನೇಮಿಸಲಾಯಿತು. ಅವರು ೨೦೧೧ ರಿಂದ ೨೦೧೪ ರವರೆಗೆ ಸೈನ್ಯ ಸಲಹೆಗಾರರಾಗಿದ್ದ ಲೆಫ್ಟಿನೆಂಟ್ ಜನರಲ್ ಪ್ರಕಾಶ್ ಮೆನನ್ ಅವರ ಉತ್ತರಾಧಿಕಾರಿಯಾಗಿದ್ದರು. ಈ ಸ್ಥಾನವು ೨೦೧೮ ರಲ್ಲಿ ಖಂಡಾರೆ ಅವರು ನೇಮಕಗೊಳ್ಳುವವರೆಗೂ ಖಾಲಿಯಾಗಿತ್ತು, ಈ ನೆಮಕಾತಿಯೊಂದಿಗೆ ಅವರು ಎನ್‌ಎಸ್‌ಸಿ‌ಎಸ್ ಇತಿಹಾಸದಲ್ಲೇ ಎರಡನೇ ಮಿಲಿಟರಿ ಸಲಹೆಗಾರರು ಎಂದು ಹೆಸರಾದರು. ಅವರ ನೇಮಕಾತಿಯ ಭಾಗವಾಗಿ ಎನ್‌ಎಸ್‌ಸಿ‌ಎಸ್ ಮಿಲಿಟರಿ ವಿಭಾಗವನ್ನು ಪುನರುಜ್ಜೀವನಗೊಳಿಸಲಾಯಿತು. ಸೆಪ್ಟೆಂಬರ್ ೨೦೨೧ ರಲ್ಲಿ, ಖಂಡಾರೆ ಅವರು ನೈಜೀರಿಯಾದ ರಕ್ಷಣಾ ಸಂಸ್ಥೆಗಳೊಂದಿಗೆ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ನೈಜೀರಿಯಾಗೆ ಭಾರತೀಯ ರಕ್ಷಣಾ ನಿಯೋಗದ ಮುಂದಾಳತ್ವ ವಹಿಸಿದ್ದರು. ಈ ನಿಯೋಗದಲ್ಲಿ ಸದಸ್ಯರು, ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮೂರು ಸಶಸ್ತ್ರ ಪಡೆಗಳು ಮತ್ತು ರಕ್ಷಣಾ ಉದ್ಯಮದ ಪ್ರತಿನಿಧಿಗಳು ಸೇರಿದ್ದರು. == ಗೌರವಗಳು == ಯುಎನ್ ಪದಕ-ಒ.ಎನ್.ಯು.ಎಸ್.ಎ.ಎಲ್- ೧೯೯೩ ಸೇನಾ ಪದಕ (ಗ್ಯಾಲಂಟ್ರಿ-ಗಣರಾಜ್ಯೋತ್ಸವ- ೨೦೦೨ ಸೇನಾ ಸಿಬ್ಬಂದಿ ಮುಖ್ಯಸ್ಥರ ಶ್ಲಾಘನಾ ಪತ್ರ-ಸೇನಾ ದಿನ- ೨೦೧೨ ಅತಿ ವಿಶಿಷ್ಟ ಸೇವಾ ಪದಕ-ಗಣರಾಜ್ಯೋತ್ಸವ- ೨೦೧೫ ಪರಮ ವಿಶಿಷ್ಟ ಸೇವಾ ಪದಕ-ಗಣರಾಜ್ಯೋತ್ಸವ- ೨೦೧೭ == ಉಲ್ಲೇಖಗಳು ==